ಗುರುವಾರ, ನವೆಂಬರ್ 29, 2012

ಜೋಗಿ

ಹೊತ್ತಿಗೆ ಸರಿಯಾಗಿ ಎದ್ದು, 
ಮುತ್ತಿನ ಮಾತ ನುಡಿವ ಜೋಗಿ, 
ಹೊರಟಿರುವೆ ಮನೆ ಮನೆ ಹಾಡಲು.

ಜಗದ ಗೊಡವೆಯ ತೊರೆದು, ಪರಮಾತ್ಮನ ನುಡಿಯ ಉಲಿದು, 
ಭಕ್ತಿಯ ಪರಮಾನ್ನ ಉಣಬಡಿಸಲು, 
ಹೊರಟಿರುವೆ ಜೋಗಿ ಮನೆ ಮನೆಗೆ.

ವೇಷವೇ ಸೋಜಿಗ,
ಅದರೊಳಗೆಲ್ಲವೂ ಭಕ್ತಿ ಯುಗ,
ಮುಕ್ತಿಯ ಮಧುರ ಮನ ತುಂಬಲು, ಹೊರಟಿರುವೆ ಜೋಗಿ ಮನೆ ಮನೆಗೆ.

ಭಕ್ತಿಯ ಭಿಕ್ಷೆ ಬೇಡುವೆ,
ಮುಕ್ತಿಯ ಮಾರ್ಗ ಹಾಡಿ ತೋರಿಸುವೆ, ಭವದ ಸಂಕಟ ಮರೆಸಲು,
ಹೋರಟಿರುವೆ ಜೋಗಿ ಮನೆ ಮನೆಗೆ.

ಓ ಜೋಗಿ ನಿನ್ನ ಈ ಕಾಯಕಕೆ ನೆಲೆಯಿಲ್ಲ,
ಈ ಜಗವೆ ನಿನ್ನ ಅರಮನೆಯಲ್ಲ, ಭಕ್ತಿಯ ದಾರಿ ತೋರಿಸಿ,
ಮುಕ್ತಿಯ ಮಾರ್ಗ ಕಲಿಸಲು,
ಸದಾ ಸಾಗು ಜೋಗಿ ನೀ ಮನೆಯಿಂದ ಮನೆಗೆ.....!

$ ವಸಂತ ಬಿ ಈಶ್ವರಗೆರೆ $

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ