ಗುರುವಾರ, ನವೆಂಬರ್ 29, 2012

ಜೋಗಿ

ಹೊತ್ತಿಗೆ ಸರಿಯಾಗಿ ಎದ್ದು, 
ಮುತ್ತಿನ ಮಾತ ನುಡಿವ ಜೋಗಿ, 
ಹೊರಟಿರುವೆ ಮನೆ ಮನೆ ಹಾಡಲು.

ಜಗದ ಗೊಡವೆಯ ತೊರೆದು, ಪರಮಾತ್ಮನ ನುಡಿಯ ಉಲಿದು, 
ಭಕ್ತಿಯ ಪರಮಾನ್ನ ಉಣಬಡಿಸಲು, 
ಹೊರಟಿರುವೆ ಜೋಗಿ ಮನೆ ಮನೆಗೆ.

ವೇಷವೇ ಸೋಜಿಗ,
ಅದರೊಳಗೆಲ್ಲವೂ ಭಕ್ತಿ ಯುಗ,
ಮುಕ್ತಿಯ ಮಧುರ ಮನ ತುಂಬಲು, ಹೊರಟಿರುವೆ ಜೋಗಿ ಮನೆ ಮನೆಗೆ.

ಭಕ್ತಿಯ ಭಿಕ್ಷೆ ಬೇಡುವೆ,
ಮುಕ್ತಿಯ ಮಾರ್ಗ ಹಾಡಿ ತೋರಿಸುವೆ, ಭವದ ಸಂಕಟ ಮರೆಸಲು,
ಹೋರಟಿರುವೆ ಜೋಗಿ ಮನೆ ಮನೆಗೆ.

ಓ ಜೋಗಿ ನಿನ್ನ ಈ ಕಾಯಕಕೆ ನೆಲೆಯಿಲ್ಲ,
ಈ ಜಗವೆ ನಿನ್ನ ಅರಮನೆಯಲ್ಲ, ಭಕ್ತಿಯ ದಾರಿ ತೋರಿಸಿ,
ಮುಕ್ತಿಯ ಮಾರ್ಗ ಕಲಿಸಲು,
ಸದಾ ಸಾಗು ಜೋಗಿ ನೀ ಮನೆಯಿಂದ ಮನೆಗೆ.....!

$ ವಸಂತ ಬಿ ಈಶ್ವರಗೆರೆ $

ಮಳೆರಾಯ

ಬರಡು ಭೂಮಿಗೆ, 
ಮುತ್ತಿನ ಹನಿಗಳ ಸುರಿಸಿ, 
ಹಸಿರ ಚಿಗುರಿಸು ಮಳೆರಾಯ. 

ಕಾದು ಬಾಯ್ದೆರೆದಿದೆ, 
ನಿನ್ನ ಆಗಮನದ ನಿರೀಕ್ಷೆಯಲಿದೆ, ಸುರಿಯಲು ಬಾರೆಯ ಮಹರಾಯ..?

ರೈತ ಮುಗಿಲತ್ತ ನೋಡುತ, 
ಪಶು ಪಕ್ಷಿಗಳೆಲ್ಲ ನಿನಗಾಗಿ ಹುಯ್ಯಲಿಡುತ, 
ಕರುಣೆ ತೋರಲಾರೆಯ ಮುನಿದ ಮಾಯ...? 

ಬೆಟ್ಟದಲಿ ಹಸಿರಿಲ್ಲ, 
ಭುವಿಯಲಿ ತಂಪಿನ ಕಂಪಿಲ್ಲ, ತೋರಲಾರೆಯ ಹೊಸ ಚೇತನ ರಾಯ...? 

ನೀರಿಗಾಗಿ ಆಹಕಾರ ಏಳುವ ಮುನ್ನ, 
ಜಾನುವಾರುಗಳು ಹಸಿವಿನಿಂದ ಸಾಯುವ ಮುನ್ನ, 
ಈ ಧರೆ ಬಾಯಿ ಬಿಟ್ಟು ಎಲ್ಲರನು ಮಣ್ಣಾಗಿಸುವ ಮುನ್ನ, 
ನಿನ್ನ ಸಿಂಚನ ಸುರಿಸು, 
ಕುಂಚದಲಿ ಹಸಿರ ಸಿರಿಯನು ಮೂಡಿಸು, 
ಜನ ಜಾನುವಾರುಗಳ ಮನ ದುಂಬಿ ನಲಿಸು....!

$ ವಸಂತ ಬಿ ಈಶ್ವರಗೆರೆ $

ಬುಧವಾರ, ನವೆಂಬರ್ 7, 2012

ಉತ್ತರವಿಲ್ಲ

ಸಂಬಂಧಗಳ ಕೊಂಡಿ ಕಳಚಿ,
ಸ್ನೇಹದ ಸಲುಗೆಯ ಬಿಚ್ಚಿ,
ಪ್ರೀತಿಯ ಒಲುಮೆಯ ಚುಚ್ಚಿ,
ಬಿಟ್ಟು ಹೊರಟೆ ನೀ ಏಲ್ಲಿಗೆ ....?

ಉತ್ತರ ನಿನ್ನೊಳಗೆ ಇಲ್ಲ ಎಂದರೇ...
ಪ್ರಶ್ನೆಗಳ ಹುಟ್ಟಿಸಿದ್ದಾದರೂ  ಏಕೆ ನನ್ನೊಳಗೆ.....?

ನಿನಗೆ ನನ್ನ ಸಂಬಂಧ ಬೇಡ,
ಪ್ರೀತಿಯ ಒಲುಮೆಯೂ ಬೇಡ,
ನನ್ನ ಸ್ನೇಹದ ಸಹವಾಸವಂತೂ ಬೇಡವೇ ಬೇಡ.
ಆದರೇ.....!
ಅನಾಮಿಕೆಯಂತೆ ಅದರೂ ಇರಬಹುದಲ್ಲವೇ ಜೊತೆಗೆ.....?

ನಿನ್ನಿಂದ ಮೊದಲ ಸ್ನೇಹ
ಪ್ರೇಮ ಸಿಗದೇ ಹೋದರೂ..
ನೆನಪೋಳಗಾದರೂ...
ಕನವರಿಕೆಯ ನಲುಮೆಯಿಂದಾದರೂ...
ಎಲ್ಲವ ಮರೆತು ಮಾತಡಬಹುದಲ್ಲವೇ ನನ್ನ ಜೊತೆಗೆ...?

ಅದರೂ ಒಮ್ಮೊಮ್ಮೆ ಅನಿಸುವುದು
ನನ್ನ ಮನ ಮಿಡಿದ ವಾತ್ಸಲ್ಯ,
ನೆಮ್ಮದಿಯ ಸ್ನೇಹದ ಸಾಂಗತ್ಯ,
ಪ್ರೀತಿಯ ರಸದ ಚಿಲುಮೆ,
ಏಕೆ ಬೇಡವಾಯಿತು ನಿನಗೆ ಎಂದು.....?


ನನ್ನ ಪ್ರಶ್ನೆಗಳಿಗೆ ಕಾಲ ಉತ್ತರ ನೀಡಬೇಕಿಲ್ಲ..
ನೀನೆ  ನೀಡಬೇಕು...!

ನಾ ಕಾಯುವೆ ದಿನಕ್ಕಾಗೆ,
ಅದೆಷ್ಟು ಬೆಂದರೂ ಬೇಗೆ,
ಬೇಯಲಿ ಅಲ್ಲಿಯವರೆಗೂ ನನ್ನೊಳಗೆ.....!

$
ವಸಂತ ಬಿ ಈಶ್ವರಗೆರೆ $

ಭಾನುವಾರ, ನವೆಂಬರ್ 4, 2012

ಬಿಟ್ಟು ಹೋದೆಲ್ಲಿಗೆ ಗೆಳತಿ



ಹೇಗೆ ಮರೆಯಲಿ ಗೆಳತಿ ನಿನ್ನ ನೆನಪ...?
ಮರೆತರು ಮರೆಯಲಾಗದು ನಿನ್ನೊಟ್ಟಿಗೆ  ಕಳೆದ ನೆನಪ..?

ಭಾವನೆಗಳಿಗೆ ಬಣ್ಣ ಕೊಟ್ಟು,
ಕಲ್ಪನೆಗೆ ರೂಪ ಇಟ್ಟು,
ಜೊತೆಗೆ ನಡೆದ ನೆನಪ
ಮರೆಯಲಾಗದು ಗೆಳತಿ  ನಿನ್ನ ನೆನಪ...!

ಕೈ ಹಿಡಿದು ಜೊತೆ ನಡೆದೆ,
ಕೋಟಿ ಕೋಟಿ ಕನಸುಗಳ ನನ್ನೊಂದಿಗೆ ಕಟ್ಟಿ,
ಕಲ್ಪನೆಗೂ ನಿಲುಕದ ಭಾವನೆಗಳ ಬೆಳಸಿದೆ,
ಕನಸುಗಳು ಮಾಗಿ,
ಹೂಬಿರಿದು ಬಾಗಿ,
ಮುಡಿಯ ಸೇರಲು ಹವಣಿಸುವ ವೇಳೆ
ಬಿಟ್ಟು ಹೊದೆಲ್ಲಿಗೆ ಗೆಳತಿ....?

ಕಷ್ಟ ನೂರು ಇರಲಿ
ಇಷ್ಟದಿ ಬದುಕುವ ಜೀವನ ಕಲಿಸಿದೆ,
ಬದುಕೇ ಬೇಡವೆಂದಾಗ ಬದುಕಿ ಸಾದಿಸುವ  ಛಲ ತುಂಬಿದೆ,
ಛಲದಲ್ಲಿ ಸಾದಿಸಿ ಗುರಿ ಮುಟ್ಟಿ ನಿನ್ನ ಜೊತೆಗೂಡುವ ಮುನ್ನ...
ಬಿಟ್ಟು ಹೊದೆಯ ಗೆಳತಿ ನನ್ನ ಒಂಟಿಯಾಗಿ....?

ಗೆಳತಿ ಈಗ ನೀನಿಲ್ಲ ನನ್ನೊಂದಿಗೆ...
ಆದರೆ ಸದಾ ಇದೆ ನಿನ್ನ ನೆನಪು ನನ್ನ ಜೊತೆಗೆ...!

$ ವಸಂತ ಬಿ ಈಶ್ವರಗೆರೆ $