ಭಾನುವಾರ, ಅಕ್ಟೋಬರ್ 14, 2012

ಅರ್ಧ ಬರೆದ ಕವನ 8


ನಿನ್ನ ಸುತ್ತ ಸುತ್ತುತ್ತೇನೆ ಗಾಳಿ ತರ.

ಕಂಡರೂ ಕಾಣದ ಹಾಗೆ ಇರುತ್ತೀನಿ ದೆವ್ವದ ತರ. 

ಪ್ರೀತಿ ಮಾಡ್ತೇನೆ ಷಹಜಹಾನ್ಗಿಂತ ಸ್ವಲ್ಪ ಕಡಿಮೆ ತರ.

ಉಸಿರೂಳಗೆ ಉಸಿರಾಗಿರುತ್ತೀನಿ ನಿನ್ನ ಎದೆ ಬಡಿತದ ತರ.

ದಿನಾಲೂ ಬೀಳೋ ಕನಸಾಗಿ ಬರುತ್ತೇನೆ ನೆನಪಿನ ತರ.

ಹೆದರಬೇಡ ಹುಡುಗಿ
ಎಲ್ಲೂ ಹೋಗದೇ ಇರುತ್ತೀನಿ ಸದಾ ನಿನ್ನ ಹುಡುಗನ್ ತರ.
 
 
$ ವಸಂತ ಬಿ ಈಶ್ವರಗೆರೆ $

ಅರ್ಧ ಬರೆದ ಕವನ 7

ಕಳೆದದ್ದು  ಕೆಲವೇ  ಕೆಲವು ದಿನ, 
ಅದರೇ..! 
ಅವೆಷ್ಟು ಕನವರಿಕೆ ನಿನ್ನ ಬಗ್ಗೆ, 
ನೆನಪಿನ ಬುತ್ತಿಯ ಹೊರಗೂ-ಒಳಗೆ. 

ಮಡುಗಟ್ಟಿತ್ತು ದುಃಖ, 
ಕಳೆ ಗುಂದಿತ್ತು ಮನಸ್ಸು, 
ನಿನ್ನ ನೆನಪಿನ ಕೊರಗು-ಮರುಗಿನೊಳಗೆ. 

ಎಷ್ಟು ದಿನ ಈ ಮೌನ..? 
ಯಾಕಾಗಿ ಈ  ದ್ಯಾನ.? ಹೇಳಬಾರದೆ ಗೆಳತಿ ನಿನ್ನ ಮನದೊಳಗಿನ ಗ್ಯಾನ..!

ಕಾಯಿಸಬೇಡ ನೀ ಹೀಗೆ, 
ಕಾಯಲಾರೆ ನಾ ನಿನಗೆ, 
ಬಂದು ಬಿಡು ಬೇಗ ನನ್ನ ಮನಸ್ಸೆಂಬ ಮಹಲೋಳಳಗೆ..!
  
$ ವಸಂತ ಬಿ ಈಶ್ವರಗೆರ್ $

ಅರ್ಧ ಬರೆದ ಕವನ 6

ಮನ ಮಿಡಿದಿದೆ ನಿನ್ನ ಒಲವಿನಲಿ. 
ತನುಕರಗಿದೆ ನಿನ್ನ ಪ್ರೀತಿಯ ಚಿಲುಮೆಯಲಿ. 
ದೂರವಿದ್ದರೂ ಹತ್ತಿರದಿ ಇರುವ ಭಾವನೆ. 
ಹತ್ತಿರಾಗಿದ್ದರೆ ಜೋತೆಗಿದ್ದ ಭಾವನೆ.
 ನನ್ನ ಈ ನೆನಪುಗಳ ಸಾಲಿನೊಳಗೆಲ್ಲ ನಿನದೇ ನಿವೇದನೆ. 

$ ವಸಂತ ಬಿ ಈಶ್ವರಗೆರೆ $

ಅರ್ಧ ಬರೆದ ಕವನ 5

ಕರಗುವ ಹಿಬ್ಬನಿಯ ಅಂದ,
ಮಿರುಗುವ ನಿನ್ನಯ ಚೆಂದ,
ಸ್ನೇಹದೊಳಗೆ ಹೂತು,
ಪ್ರೀತಿಯೊಳಗೆ ಸೋತು,
ಮಮತೆಯೊಳಗೆ ಬಿತ್ತು.
ಭಾವನೆಯೊಳಗೆ ಕರಗಿ,
ಹಂಭಲಿಕೆಯಲಿ ಗುನುಗಿ, 
ಹುಟ್ಟಿದೆ ಇಂತಹ ಒಂದು ಕವಿತೆ.

$ ವಸಂತ ಬಿ ಈಶ್ವರಗೆರೆ $ 

ಅರ್ಧ ಬರೆದ ಕವನ 4

ಕಾರ್ಮೋಡ ಕವಿದಿರುಳ ಒಳಗೆ ಕಾಣದೆ ಮರೆಯಾಗಿರುವೆ.
ಕನವರಿಕೆಯ ನೆನಪು ನಮ್ಮಿಬ್ಬರ ಒಳಗೂ ಮಾಸಿಲ್ಲ.
ಕರಿ ಮುಗಿಲ ಮರೆಯೊಳಗೆ ಮಿಂಚಿ ಮಿನುಗುವ ನಕ್ಷೆತ್ರದಂತೆ ಮಿನುಗುತಿದೆ. 
ಮನ ತೆರೆದು ನೋಡೋಮ್ಮೆ...!
ಬಾಂದಳದಿ ಮರೆಯಾದ ಸೂರ್ಯ ನಾಳೆ ಮತ್ತದೇ ಜಗವ ಬೆಳಗುವನು...!
ನಿನ್ನ ನೆನೆವ ನನ್ನ ಮನದೊಳಗೆ,
ನೀನು ಪ್ರತಿ ದಿನವು ಬೆಳಗುವೆ....!

$ ವಸಂತ ಬಿ ಈಶ್ವರಗೆರೆ $ 

ಅರ್ಧ ಬರೆದ ಕವನ 3

ನೆನಪಾಗುವೆ ಹಗಲಿರುಳು ಎನ್ನದೆ.
ಕನಸಾಗಿ ಕಾಡುವೆ ನೆನಪಿನೊಳಗೆ.
ಮಾತಿಗೆ ಜೊತೆಯಾಗುವೆ ಮೌನದೊಳಗೆ.
ಪ್ರೀತಿಗೆ ಪ್ರಾಣವನ್ನೇ ಕೊಡುವೆ ಈ ಸ್ನೇಹದೊಳಗೆ.
ಇಂತಹ ನಿನ್ನ ನಾ ಮರೆವುದು ಉಂಟೆ ಕನಸು-ಮನಸಿನೊಳಗೆ...!?

$ ವಸಂತ ಬಿ ಈಶ್ವರಗೆರೆ $

ಅರ್ಧ ಬರೆದ ಕವನ 2

ಬದಲಾಗುವ ಜಗದೊಳಗೆ,
ಕದಲುವೆವು ಅಡಿಗಡಿಗೆ,
ಕಾಣದ ಕೈಗಳ ಕಾಟ,
ಜೀವನ ದುಡಿಮೆಯ ಓಟ,
ಬೆಂದು, ನೊಂದು, ನಲುಗಿದರೂ
ಮುನ್ನುಗ್ಗಲಿ ಮುಂದಿನ ಗುರಿಯತ್ತ ನಮ್ಮ ನೋಟ....! 
ಶುಭ ಸಂಜೆ ಗೆಳೆಯರೇ.....!

$ ವಸಂತ ಬಿ ಈಶ್ವರಗೆರೆ $

ಅರ್ಧ ಬರೆದ ಕವನ 1

ಪೆನ್ನಿಗೆ ಸ್ಫೂರ್ತಿ ತುಂಬಿ,
ಖಾಲಿ ಪುಟದಲಿ ಭಾವನೆ ಒತ್ತಿ,
ಬರೆದು ಕಳಿಸು ನಿನ್ನೋಲವಿನ ನೆನಪಿನೋಲೆ.

ಪ್ರತಿ ಸಾಲು ನನಗಾಗಿ,
ಪ್ರತಿ ಪದವು ಇನಿಯನ ಉಸಿರಾಗಿ,
ಕಟ್ಟಿ ಬರಲಿ ಅಚ್ಚೋತ್ತಿರದ ನಿನ್ನ ಅಂದದ ಓಲೆ.

ಮನಸಿನೊಳಗಿನ ಭಾವನೆ,
ನೆನಪಿನ ಒಳಗಿನ ನನ್ನಯ ಕನಸು,
ಪ್ರತಿ ಒಲೆಯ ಒಳಗೆಲ್ಲ ಹಸಿರಾಗಿ,
ಉಸಿರು ನಿಲ್ಲುವ ತನಕ,
ನೆಲೆ ನಿಲ್ಲುವಂತಿರಲಿ ಆ ನಿನ್ನ ಓಲೆ....!

$ ವಸಂತ ಬಿ ಈಶ್ವರಗೆರೆ $