ಮಂಗಳವಾರ, ಮಾರ್ಚ್ 19, 2013

ಯುದ್ದ


ರಾಜರಾಳ್ವಿಕೆಯಲಿ ರಾಜ್ಯ ಕಬಳಿಕೆಗಾಗಿ ಯುದ್ದ,
ಗಾಂಧೀ ಕಾಲದಲಿ ಶಾಂತಿ ಅಸ್ತ್ರದಿ ಸ್ವಾತಂತ್ರಗಳಿಕೆಗಾಗಿ ನಡೆಯಿತು ಯುದ್ದ,
ನೆಹರು ಕಾಲದಲಿ ದೇಶ ರಕ್ಷಣೆಗಾಗಿ ನಡೆದಿತ್ತು ಯುದ್ದ,
ವೀರಪ್ಪನ್ನ ಕಾಲದಲಿ ಗಂಧ-ದಂತಕಾಗಿ ನಡೆದಿತ್ತು ಯುದ್ದ,
ಪ್ರಪಂಚ ತನ್ನಾಸರೆಯೊಳಗಿರಬೇಕೆಂದು ಅಮೇರಿಕಾ ಮಾಡಿತು ೧, ೨ನೇ ಮಹಾಯುದ್ದ,
ಅವಿಭಕ್ತ ಕುಟುಂಬದೊಳಗೂ ವಿಭಕ್ತಿಗಾಗಿ ನಡೆಯುತಿದೆ ದಿನಾಲೂ ಯುದ್ದ,
ರಾಜಕಾರಣಿಗಳ ಅಧಿಕಾರ ದಾಹದಿಂದ ನಡೆಯುತಿದೆ ವಿಧಾನ ಸೌದದಲಿ ಯುದ್ದ,
ಬಡತನದಿ ಬೆಂದ ಜನ ಹಸಿವ ನೀಗಿಸಲು ನಡೆಸುತ್ತಿದ್ದಾರೆ ಯುದ್ದ,
ಏನಾದರೇನಂತೆ..,
ಕೇಳುವುದೇ ಈ ಸಂತೆ..?
ಕಾಲಗರ್ಭದಲ್ಲೀಗ ಅವುಗಳದೇ ಕಂತೆ...!

$ ವಸಂತ ಬಿ ಈಶ್ವರಗೆರೆ $

ಇರುವೆ


ಇರುವೆ ಇರುವೆ ಕಪ್ಪಿರುವೆ
ಎಲ್ಲರ ಪ್ರೀತಿಯ ಗಳಿಸಿರುವೆ.
ಬೇಸಿಗೆಯಲಿ ಮನೆ ಕಟ್ಟಿರುವೆ,
ಮಳೆಗಾಲಕೆಂದು ಆಹಾರ ಸಂಗ್ರಹಿಸಿರುವೆ.
ಮೈಯನು ಏರಲು ಕಚಗುಳಿ ಇಡುವೆ,
ಹಿಡಿಯಲು ಬಂದರೆ ಜಾರುತಲಿರುವೆ,
ಇರುವೆ ಇರುವೆ ಕಪ್ಪಿರುವೆ,
ಎಲ್ಲರ ಪ್ರೀತಿಯ ಗಳೆಸಿರುವೆ.

$ ವಸಂತ ಬಿ ಈಶ್ವರಗೆರೆ $