ಭಾನುವಾರ, ಏಪ್ರಿಲ್ 15, 2012

ನಾನೀಗ ಕವಿಯಾಗುವೆ

ಕವಿಯಾಗುವೆ
ಮಲೆನಾಡ ಮಡಿಲೊಳಗೆ ಮಗುವಾಗುವೆ....!
ಹಸಿರೋದ್ದ ಸೆರಗೊಳಗೆ 
ಬಿಸಿಯಪ್ಪುಗೆಯ ಆಲಿಂಗನ  
ಮೈಮರೆತು ನಾನೀಗ ಕವಿಯಗುವೆ 
ಮುದ್ದು ಮಗುವಾಗುವೆ...!
 
ಗುಯ್ ಗುಡುವ ಜೇಂಕಾರದ ಸದ್ದು 
ಸಾಲಂಕೃತ ಮರಗಳ ಸಾಲು
ಇದುವೇ ನನ್ನಯಾ ಅರಮನೆ 
ಇಲ್ಲೇ ನನ್ನರಸಿಯ ಸಿರಿಮನೆ
ಕವಿಯಾಗುವೆ ನಾ ಹಸಿರೊಳಗೆ 
ಹಾಲುಗಲ್ಲದ ಮಗುವಾಗುವೆ....!
 
ಕಪ್ಪು ಕಾನನದೊಳಗೆ
ಮೆಚ್ಚಿನ ಪ್ರೀತಿಯ ಬೆಸುಗೆ
ಹುಚ್ಚೆದ್ದು ಕುಣಿದಿದೆ ಮನ
ಮೆಚ್ಚಿ ಉಲಿದಿದೆ ತನು
ಕವಿಯಾಗುವೆ ಮಲೆನಾಡ ಕುವರಿಯ ಜೊತೆ
ಕವಿಯಂತೆ ಕುವರ ನಾ ಆಗುವೆ.....
ಹಸಿರಿನ ಮದುವಣಗಿತ್ತಿಯ ಜೊತೆ ಹೀಗೊಮ್ಮೆ ಕವಿಯಾಗುವೆ......!
 

ಭಾನುವಾರ, ಏಪ್ರಿಲ್ 1, 2012

ತಾಯಿಯ ಮಮತೆ

ತಾಯಿ ನಿನ್ನ ಒಡಲಲ್ಲಿ
ಕಂಡೆನಾ ಮಮತೆಯ
ಮಮತೆ ಮಾತೆಯ ಮಡಿಲಿಗಿಂದು

ನೀಡುವೆ ಈ ಕವಿತೆಯ.

ನಿನ್ನ ಒಡಲು ಬೆಂಕಿಯ ಕಡಲು
ಆದರೂ ನೀ ನೀಡುವೆ ಹಾಲಿನ ಮಡಿಲು
ಅದರಿ ಮಿಂದು ಬೆಳೆದ ಈ ದೇಹ
ನಗುತ ನಲಿವುದು ಹರುಷದಿ.

ಇಂತ ಮಾತೆ ಪ್ರೀತಿ ನೆನೆದು
ದೂರದಿ ಇರುವ ಈ ಜೀವ
ತಾಯಿ ಪ್ರೀತಿ ಕಾಣದಾಗಿ
ಮರುಗುತಿಹುದು ನೋವಲಿ.........!

$ ವಸಂತ ಬಿ ಈಶ್ವರಗೆರೆ $

ತಾಯಿ-ಹೆಂಡತಿ

ತುತ್ತು ತುತ್ತಿಗೂ ಬಡತನ ಇದ್ದರು ನನ್ನ ಬೆಳೆಸಿದವಳ
ಹೆಂಡತಿ ಬಂದ ಮರುಗಳಿಗೆ ನಾ ಹೆಂಗ ಮರೆಯಳವ್ವ||
ತಾಯ ಹೆಂಗೆ ಮರೆಯಳವ್ವ...!!

ಕಾಡಿ ಬೇಡಿ ಕೂಲಿಯ ಮಾಡಿ ನನ್ನ ಬೆಳೆಸಿದವಳು
ಹೆಂಡತಿ ಪ್ರೀತಿಯ ಮಾತ ಕೇಳಿ ಹೆಂಗೆ ಮರೆಯಳವ್ವ..||
ತಾಯ ಹೆಂಗೆ ಮರೆಯಳವ್ವ...!!

ಬಹಳ ಬಡತನ ಇದ್ದರು ತಾನೆ ನುಂಗಿ ಬೆಳೆಸಿದವಳ
ಹೆಂಡತಿಯಿಂದ ಬಂದ ಸಿರಿತನದಲಿ ಹೆಂಗೆ ಮರೆಯಳವ್ವ..||
ತಾಯ ಹೆಂಗೆ ಮರೆಯಳವ್ವ....!!

ನೂರೆಂಟು ಕನಸ ಕಟ್ಟಿ ಬೆಳೆಸಿದ ತಾಯಿಯನು
ಮೂರು ಗಂಟಿನ ಮಡದಿ ಮಾತಿನಿಂದ ಹೆಂಗೆ ಮರೆಯಳವ್ವ..||
ಇವಳ ಹೆಂಗೆ ಮರೆಯಳವ್ವ....!!

$ ವಸಂತ ಬಿ ಈಶ್ವರಗೆರೆ $