ಸೋಮವಾರ, ಜನವರಿ 30, 2012

ಬದುಕು

ಬದುಕು ಜಂಜಾಟದ ಗೊಡವೆ
ನೆನಪುಗಳು ಅದರ ಒಡವೆ.
ಪ್ರೀತಿಯ ಅಲೆ ಇದ್ದಾಗ ಸಂತಸ
ಸುನಾಮಿಯ ಅಲೆ ಬಿದ್ದಾಗ ನಾಶ.
ಆದರೂ ಸಾಗಲೇ ಬೇಕು ಗೊಡವೆ, ಒಡವೆ, ಸಂತಸ, ನಾಶದ ನಡುವೆ ಬದುಕು.

ಹೆಗಲಿಗೆ ಹೆಗಲಾಗುವ ಸ್ನೇಹ
ಬಗಲಿಗೆ ಮುಳ್ಳಾಗುವ ಮೋಹ.
ನೆನಪುಗಳ ಅಲೆ ಇದ್ದಾಗ ಉಲ್ಲಾಸ
ಮೋಸದ ಬಲೆಯೋಳು ಬಿದ್ದಾಗ ನಾಶ.
ಆದರೂ ಸಾಗಲೇ ಬೇಕು ಸ್ನೇಹ, ಮೋಹ, ಉಲ್ಲಾಸ, ನಾಶದ ನಡುವೆ ಬದುಕು.

ಸರಸ ವಿರಸದ ನಡಿಗೆ
ಪ್ರೀತಿ ಪ್ರೇಮದ ಕಡೆಗೆ. 
ಮಾತೃ ಹೃದಯದ ಅಲೆ ಇದ್ದಾಗ ಸಂತಸ
ಮಧ, ಮಾತ್ಸರ್ಯದ ಅಲೆ ಎದ್ದಾಗ ನಾಶ.
ಆದರೂ ಸಾಗಲೇ ಬೇಕು ನಡಿಗೆ, ಕಡೆಗೆ, ಸಂತಸ, ನಾಶದ ನಡುವೆ ಬದುಕು.

ಒಡ ಹುಟ್ಟಿದ ಸಹೋದರರ ಕಚ-ಪಿಚ
ತಂದೆ-ತಾಯಿಗಳ ಲೊಚ-ಪಚ.
ಸಾಮರಸ್ಯದ ಅಲೆ ಇದ್ದಾಗ ಸಂತಸ
ವಿರಸದ ಅಲೆ ಎದ್ದಾಗ ನಾಶ.
ಆದರೂ ಸಾಗಲೇ ಬೇಕು ಕಚ-ಪಿಚ, ಲೊಚ-ಪಚ, ಸಂತಸ, ನಾಶದ ನಡುವೆ ಬದುಕು.

ಸೃಷ್ಟಿ ನಿಯಮದಿ ಒಡಗೂಡಿ,
ಕಾಲ ಚಕ್ರದೊಳಗೆ ಓಲಾಡಿ,
ಆದರೂ ನಡೆಯುತಿದೆ ಈ ಬದುಕು
ನೆರಳು-ಬೆಳಕಿನಾಟದ ನಡುವೆ ಮುಂದೆ, ಮುಂದೆ ಸಾಗಿ....!

ಶನಿವಾರ, ಜನವರಿ 28, 2012

ಮಮತೆ

ಬೇಸರಿಕೆಯ ಮಾತಿಲ್ಲ
ಪ್ರೀತಿಗಿಲ್ಲಿ ಕೊರತೆಯು ಇಲ್ಲ.

ಅನುರಾಗ ಬಂಧನವಿಲ್ಲಿ
ಮಮತೆಗೆ ನೂರ್ಮಡಿ ಇಲ್ಲಿ.

ಮನ ಮೆಚ್ಚಿದ ಮಾತು
ಹೃದಯ ಉಕ್ಕಿದ ಪ್ರೀತಿ.

ನೋವಿಗೆ ಹೆಗಲಾಗಿಹುದು
ನಲಿವಿನಲಿ ಭಾಗಿಯಗಿಹುದು.

ಇರಲಿ ಈ ಹೃದಯ ಉಕ್ಕಿಸಿದ,
ನೋವ ಮರೆಸಿದ,
ಬೇಸರಿಕೆ ಅಳಿಸಿದ,
ಮಮತೆ ತುಡಿಸಿದ,
ಸ್ನೇಹದ ಪ್ರೀತಿ ಅನುದಿನವು, ಅನುಕ್ಷಣವು,
ಉಸಿರು ನಿಲ್ಲುವ ತನಕ.

     $ ವಸಂತ ಬಿ ಈಶ್ವರಗೆರೆ $

ನೀ ಕಾಣುತ್ತಿಲ್ಲ

ಭಾವನೆಗೆ ಬಣ್ಣಹಚ್ಚಿ,
ಕಲ್ಪನೆಗೆ ರೂಪ ಕೊಟ್ಟು,
ಹುಡುಕುತಿರುವೆ ನೀ ಕಾಣುತ್ತಿಲ್ಲ.

ಕತ್ತಲೆಗೆ ಚಂದ್ರನ ತಂದು,
ಬೆಳಕಲ್ಲಿ ಸೂರ್ಯನ ಇಟ್ಟು,
ಹುಡುಕುತಿರುವೆ ನೀ ಕಾಣುತ್ತಿಲ್ಲ.

ನಿದ್ದೆಗೆ ನಾ ಒರಗಿ,
ಕನಸಲಿ ನಿನ್ನ ಕೂಗಿ,
ಹುಡುಕುತಿರುವೆ ನೀ ಕಾಣುತ್ತಿಲ್ಲ.

ಸಂಸಾರದ ಗೂಡುಕಟ್ಟಿ,
ಮಕ್ಕಳು ಎಂಬ ಹಕ್ಕಿಯ ರೆಕ್ಕೆ ಬಲಿತು,
ಕೃಷ್ಣನ ರಾಧೆ ನಿನಾಗಿರುವಾಗ
ನೀನೆಲ್ಲಿ ಬರುವೆ...?
ನಾ ನೆಲ್ಲಿ ಕಾಣುವೆ.....?!

ರಿಂಗಣಿಸಿತು ಫೋನು,
ಎಚ್ಚರಗೊಂಡಿತು ಮನಸ್ಸು,
ಓ...! ಇದು ಕನಸೆಂದು ನಾ ಎದ್ದೆ.

              $ ವಸಂತ ಬಿ ಈಶ್ವರಗೆರೆ $

ಗುರುವಾರ, ಜನವರಿ 26, 2012

ಮರೆಯಲಾಗದು

ಮೌನ ಮುರಿದು ಮಾತಾಡಿದ ಆ ನಗುಮುಕ
ಮರೆಯಲಾಗದು,
ತೊರೆದು ಬಿಡಲಾಗದು,
ಹಚ್ಚಾಗಿ ಉಳಿದಿಹುದು ಹೃದಯದೊಳಗೆ.

ಕಾಡಿಗೆಯ ಕಣ್ಣ ಸೌಂದರ್ಯ,
ಬಿಳಿಯುಡಿಗೆಯ ಅಂದ,
ಮೊಗಕೆ ಕೈಯಚ್ಚಿ ನಾಚಿ ನಿರಾದ ಕಿರುನಗೆ,
ಮರೆಯಲಾಗದು, ತೊರೆದು ಬಿಡಲಾಗದು,
ಹುಚ್ಚಾಗಿ ಹಚ್ಚಾಗಿಹುದು ಮನಸಿನೊಳಗೆ.

ಜೋಡಿ ನಡಿಗೆಯ ದಾರಿ,
ಬಳಸಿ ಅಪ್ಪುವ ಮನಸ್ಸು,
ಬೆಳಗಿನ ಬೆರಗು ಗಣ್ಣಿಗೆ ಹೆದರಿ ಹಿಂಜರಿದ ಕ್ಷಣ,
ಮರೆಯಲಾಗದು, ತೊರೆದು ಬಿಡಲಾಗದು,
ಹಸಿರಾಗಿ ಉಳಿದಿಹುದು ಭಾವನೆಯೊಳಗೆ.

ಕಿರು ನಗೆಯ ನಾ ಬೀರಿ,
ಅವಸರದಿ ನಾ ಮಾತಾಡಿ,
ಕಾಲ ಚಕ್ರದೊಳಗೆ ಉರುಳಾಗಿ ಓಡಿ,
ದುಡಿಮೆಯ ತುತ್ತಿನ ಗೂಡ  ಸೇರಿದ ಕ್ಷಣ,
ಮರೆಯಲಾಗದು, ತೊರೆದು ಬಿಡಲಾಗದು,
ನೆನಪಾಗೆ ಉಳಿದಿಹುದು ಕನಸಿನ ಅರಮನೆಯೊಳಗೆ.
                       $ ವಸಂತ ಬಿ ಈಶ್ವರಗೆರೆ $