ಬುಧವಾರ, ಫೆಬ್ರವರಿ 22, 2012

ನೆಲ-ಮುಗಿಲು

ಎದುರು ಬದುರಾಗಿದ್ದರೂ
ಒಮ್ಮೆಯೂ ತಬ್ಬಿಕೊಳ್ಳದ ದುರ್ದೈವಿಗಳು
ಈ ನೆಲ ಮುಗಿಲುಗಳು.

ಇದರ ಮುಖ ಅದು
ಅದರ ಮುಖ ಇದು
ನೋಡಿಕೊಂಡು ನಡೆಯುವುದು ಅಷ್ಟೇ ಕಾಯಕ
ಪಾಪ ನಿರ್ಭಾಗ್ಯ ನೆಲಮುಗಿಲುಗಳು.

ಆಸೆಯ ಹಂದರ
ಆ ಮಧ್ಯದ ವಿಶಾಳದೊಷ್ಟಿದ್ದರೂ
ಕೂಡಲಾಗದು ಒಮ್ಮೆಯೂ,
ತೀರಿಸಿ ಕೊಳ್ಳಲಾಗದು ಬದುಕೆಂಬ ಬಯಕೆಯ ಭಾವನೆಗಳ.

ಭಾವದ ಬಂಧನದ ವಿಸ್ತಾರ
ಬದುಕಿನ ಹಂದರದ ಅಗಲ,
ಕೊನೆಗೊಮ್ಮೆ ಕೂಡಬಹುದಾ.......!
ಅಥವಾ ಬಯಕೆಯಲ್ಲೇ ಕೊನೆಗೊಳ್ಳುವುದಾ....?

ಆದರೂ ಒಮ್ಮೊಮ್ಮೆ ಅನಿಸುವುದು
ಈ ಅಂತರದಲಿ ಏನೋ ಭಾವದ ಬಂಧನವಿದೆ ಎಂದು.......!

$ ವಸಂತ ಬಿ ಈಶ್ವರಗೆರೆ $

ಶನಿವಾರ, ಫೆಬ್ರವರಿ 18, 2012

ಕವಿತೆ

ಕವಿತೆ....! ಪ್ರೇಮದಿ ಉದಿಸಿದೆ ಸುಗವಿತೆ
ಅದೀಗ ಆಗಿದೆ ರಸಗವಿತೆ.
ನಿನ್ನಯ ಸಹವಾಸದಿ ಮೂಡಿದೆ ಹೊಸತು ಕವಿತೆ...!

ಸೃಷ್ಟಿಯಲಿ ಗಂಡು ಹೆಣ್ಣಿಗೂ ಸ್ನೇಹ,
ಅದರಿಂದ ಮನದಲಿ ಮೂಡಿದೆ ಮೋಹ.
ಆ ಸ್ನೇಹದಿ ಮುಳುಗಿರಲು ಬಾಳಲಿ ಮೂಡಿದೆ ಹೊಸಕವಿತೆ.....!

ಪ್ರೇಮದ ಬಳ್ಳಿಯ ಬಾಡಲು ಬಿಡದು
ಬಿಸಿಲಲು ತಂಪಿತ್ತು ಸಾಕುತಲಿರಲು
ಸಮಯವೂ ಜಾರಿತು ಕವಿತೆಯೋಳು
ಹೊರ ಮೂಡಿದೆ ನಿನ್ನ ಮುಡಿ ಸೇರುವ ಕವಿತೆ ತಾನಾಗೆ.

ಸಖಿ ನೀ ಸಖನ  ಜೊತೆಗಿರಲು
ಸಂತೃಪ್ತಿಯೇ ಜೀವನ ಆಗಿರಲು
ಒಲವಿನ ಗೆಲುವಿಗೆ  ಬಯಕೆಯು ಕೂಡಿ
ಸಾಗಿದೆ ಕವಿತೆ ಈಗೆ ಸಖಿ ಸಖನ ಒಡಗೂಡಿ....!
        $ ವಸಂತ ಬಿ ಈಶ್ವರಗೆರೆ $ 

ನನ್ನಯ ಚೆಂದನ

ನನಗಾಗಿ ತಂದಿರೆ ತಾರೆ ಸುಹಾಸ
ನನ್ನಾಕೆ ಮಿನುಗಿದ್ದರೆ ಉಲ್ಲಾಸ.

ಅವಳು ಇರಲಿ ಬಳಿಯಲಿ
ಚಂದ್ರನಿಗದೆ ಬಳುವಳಿ.
ನಿಶೆಯಲು ನಗುತಿರುವೆ
ಚಂದ್ರ ತಾರೆಯಂತೆ ಸದಾ ಜೊತೆಗೆ ಇರುವೆ,
ಅದಕೆ ಅವಳು ಮೆಚ್ಚುಗೆ
ಪಡೆಯುತಿರುವೆ ಪ್ರೀತಿ ಬಲು ಹೆಚ್ಚಿಗೆ.

ಉಷೆಯೊಳಗೆ ನಿಶೆಯು ಇಣುಕಿ
ಕತ್ತಲೆಯಲ್ಲಿ ಮೆಲ್ಲ ನನ್ನ ಕೆಣಕಿ
ಹಗಲಲ್ಲೂ ಕತ್ತಲೆ ಬಂದು
ಇರುಳಲ್ಲೂ ಬೆಳಕು ಕಂಡು
ನನ್ನಾಕೆಯ ಚೆಂದನದಲಿ
ಲೋಕ ನಗಿಸಿ ಪ್ರೀತಿ ಹರಿಸಿ
ಸಾಗುತಲಿರಲಿ ಅನುದಿನ ನನ್ನಾಕೆಯ ಚೆಂದನವನ...!

 $ ವಸಂತ ಬಿ ಈಶ್ವರಗೆರೆ $

ಜಗವ ಬೆಳಕು

ಜಗವ ಬೆಳಗ ಸೂರ್ಯ ಬಂದ
ರಾತ್ರಿ ಬೆಳಗ ಚಂದ್ರನೆದ್ದ
ಜಗವು  ಬೆಳಗಿದೆ.

ಸೂರ್ಯ ಕಿರಣದಿ ಹಸಿರು ಮೂಡಿ
ಹೂಗಳೊಳಗೆ ಬಣ್ಣ ಹುಟ್ಟಿ
ಮದುವ ಹೀರಲು ದುಂಬಿ ಬಂದು
ಜಗವು ಬೆಳಗಿದೆ.

ನೀಲಾಕಾಶದಿ ಮೋಡ ಕಟ್ಟಿ  
ಮುಗಿಲಿನ ಅಂದದ ಹೊಳಪು ಹೆಚ್ಚಿ
ಎತ್ತರೆತ್ತರದಲಿ ಬಾನಾಡಿ ಹಾರಿಬಂದು
ಜಗವು ಬೆಳಗಿದೆ.

ಹರಿವ ನದಿಯ ಕಳಕಿಲ ನಾದ
ಮಲೆನಾಡಿನ ಪರಿಪರಿಯ ರೂಪ
ನೋಡುವ ಬಾನಾಡಿಯ ರಸದ ಸಂಗಮ
ಹಾಡು ಕಟ್ಟಿ, ಹಾಡಿನೋಲುಮೆ
ಜಗವು ಬೆಳಗಿದೆ.
       $ ವಸಂತ ಬಿ ಈಶ್ವರಗೆರೆ $ 

ಬಾಳೊಂದು ಹೂಬನ

ಬರಿದಾದ ಬಾಳಲಿ ಹೂವಾಗಿ ನಿ ಬಂದೆ
ಕತ್ತಲಾಗಿದ್ದ ಬಾಳಿಗೆ ಹೊಸ ಬೆಳಕ ತಂದೆ.
ಬಾಳೊಂದು ಹೂಬನ
ನೀ ಇತ್ತುದೆ ಹೊಂಗಿರಣ.

ಮುಳ್ಳುದಾರಿಯ ಬದಿಗೆ ಸರಿಸಿ
ಹೂವಿನಾಸಿಗೆಯ  ನಗೆಯಲಿ ತರಿಸಿದೆ.
ಬಾಳೊಂದು ಹೂಬನ
ನೀ ಇತ್ತುದೆ ಹೊಸ ಚೇತನ.

ಪ್ರೀಮಕ್ಕೊಂದು ಅರ್ಥ ತೋರಿ
ಪ್ರೀತಿಗೊಂದು ಸಾರ್ಥಕತೆ ಬೀರಿದೆ.
ಬಾಳೊಂದು ಹೂಬನ
ನೀ ಇತ್ತುದೆ ನೆನವುದು ಈ ಮನ.

ಎರಡು ದಿನದ ಹರೆಯ ಹೋಯ್ತು
ಮರಳಿ ಮತ್ತೆ ನೆರೆಯು ಬಂತು
ಬಾಳೊಂದು ಹೂಬನ
ನೀ ನಡೆದುದೇ ಅನಿಕೇತನ.

ಪ್ರೇಮ ಪಾಠ ಬಾಳತುಂಬಿ
ಪಾಠ ಮರೆವುದೆನಿತು ಸರಿ
ಬಾಳೊಂದು ಹೂಬನ
ನೀ ನಡೆದು ಮುನ್ನುಗ್ಗಿದಾಗಲೇ ಹಸನು ಜೀವನ.

$ ವಸಂತ ಬಿ ಈಶ್ವರಗೆರೆ

ಬುಧವಾರ, ಫೆಬ್ರವರಿ 8, 2012

ನೀನಿಲ್ಲದೆ

ಬೆಳಗಿನಲ್ಲಿ ನೆರಳಿಲ್ಲ
ನೀನಿಲ್ಲದೆ ನಾನಿಲ್ಲ.
ನಿನ್ನ ಕಾಣದ ಕನಸು ಕನಸಲ್ಲ,
ನಿನ್ನ ನೋಡದ ಮನಸು ಮನಸಲ್ಲ.
ನೀನಿಲ್ಲದೆ ನಾನಿಲ್ಲ, ಬೆಳಕಿರದೆ ಬದುಕಿಲ್ಲ.

ಎಷ್ಟು ಕನಸು ನಿನ್ನ ಬಗೆಗೆ,
ಆಸೆಯ ಅಕ್ಷಯ ಪಾತ್ರೆಯ ಹೊಳಗು-ಹೊರಗೆ,
ನಿನ್ನ ತವಕ ಮನದ ಒಳಗೆ,
ನಿನ್ನ ಬಡಿತ ಎದೆಯ ಒಳಗೆ,
ನೀನಿಲ್ಲದೆ ನಾನಿಲ್ಲ, ಬೆಳಕಿರದೆ ಬದುಕಿಲ್ಲ.

ಬಾಳುವ ಆಸೆಯ ಮನಸಿನೊಳಗೆ,
ಕೂಡುವ ಬೇಗ ಕನಸಿನೊಳಗೆ,
ನಿನ್ನ ಮಿಡಿತದ ತಕ ತಕ,
ನಿನ್ನ ಉಸಿರಿನ  ಮಿಕ ಮಿಕ
ನೀನಿಲ್ಲದೆ ನಾನಿಲ್ಲ, ಬೆಳಕಿರದೆ ಬದುಕಿಲ್ಲ.

ಅನುರಾಗದಿ ತುಂಬಿ ಬಂದು,
ಅನುಗಾಲ ಇರಲಿ ಎಂದು,
ನೀನೆ ಮನದ ಮಂದಾರ,
ನೀನೆ ಪ್ರೀತಿಗೆ  ಶ್ರುಂಗಾರ,
ನೀನಿಲ್ಲದೆ ನಾನಿಲ್ಲ, ಬೆಳಕಿರದೆ ಬದುಕಿಲ್ಲ.

ಮನದಾನಂದವು ಹೆಚ್ಚಾಗಿ,
ಜಗದಾನಂದದಿ ಒಳಗಾಗಿ,
ನಿನ್ನ ಸೇರುವೆ ನಾನೀಗ
ಬಾಳು ಬೆಳಗಲಿ ಕೊನೆಗೀಗ....!

ಬಾಹು ಬಂಧನ

ನನ್ನ ಬಾಹು ಬಂಧನದಿ
ಅಭಿಸಾರಿಕೆಯ ಅನುರಾಗದಿ
ಮಿನುಗಿರುವೆ ತಾರೆ ನೀನಾಗಿ
ಸೇರುವ ಈಗ ನಕ್ಷೆತ್ರಗಳಾಗಿ.

ನನ್ನ ಪ್ರೀತಿ ಮೆಚ್ಚಿ ಬಂದೆ
ನಿನ್ನೊಲುಮೆಯಲಿ ಸ್ವಾತಿ ಮುತ್ತ ತಂದೆ
ಮೀಯುವ ಅನುರಾಗದಿ
ಸೇರುವ ಜೊತೆ ಬಾನಂಗಳದಿ.

ಕಾಡಿಗೆಯ ಕಣ್ಣ ಸನ್ನೆಯಲಿ
ಸರಸದ ಕಿರುನಗೆಯ ಬೀರಿ
ಕರೆದಿರುವೆ ಮಂಚಕೆ
ಸೇರುವ ನಡೆ ಅನುರಾಗದ ಉತ್ತುಂಗಕೆ.

ನಿನ್ನ ಚೆಲುವೆ ಕವಿತೆಯಾಗಿ
ಸಪ್ತ ಸ್ವರದಿ ರಾಗವಾಗಿ
ಮುರಳಿ ನಿನಾದ ಹೊರಟಿದೆ
ಕೊನೆಗೆ ಈಗ ಬಾಹು ಬಂಧನ ಬಿಗಿಯಾಗಿದೆ.