ಗುರುವಾರ, ಡಿಸೆಂಬರ್ 6, 2012

ತನಿಖೆ


ಆವಾಗ್ ಆವಾಗ್
ಬಿಡುಗಡೆ ಮಾಡ್ತರೆ ಭೂ ಹಗರಣ,
ಇದೇ ನೋಡ್ರೀ ನಮ್ ರಾಜಕಾರಣಿಗಳ್ ಮುಖದ್ ಆನಾವರಣ.

ಅನಾವರಣದಿಂದ್ ಆಗ್ತಾವ್ ಇವರ್ ಒಳ ಮುಖದ ಆವರಣ,
ಆವರಣ-ಅನಾವರಣಕ್ಕೆ ವಿರೋಧ ಪಕ್ಷಗಳ್ ತನಿಖೆ ಆಗಬೇಕ್ ಅನ್ನೋ ಓರ್ಣ,
ಈ ತನಿಖೆಗಾ ಇಡಿತಾವ್ ರೀ...
ಈಗೀಗಾ ದಿನಗಳ್, ವಾರಂಗಳ್, ಮಾಸಂಗಳ್, ವರ್ಷಂಗಳ್.....!

$ ವಸಂತ ಬಿ ಈಶ್ವರಗೆರೆ $

ಗುರುವಾರ, ನವೆಂಬರ್ 29, 2012

ಜೋಗಿ

ಹೊತ್ತಿಗೆ ಸರಿಯಾಗಿ ಎದ್ದು, 
ಮುತ್ತಿನ ಮಾತ ನುಡಿವ ಜೋಗಿ, 
ಹೊರಟಿರುವೆ ಮನೆ ಮನೆ ಹಾಡಲು.

ಜಗದ ಗೊಡವೆಯ ತೊರೆದು, ಪರಮಾತ್ಮನ ನುಡಿಯ ಉಲಿದು, 
ಭಕ್ತಿಯ ಪರಮಾನ್ನ ಉಣಬಡಿಸಲು, 
ಹೊರಟಿರುವೆ ಜೋಗಿ ಮನೆ ಮನೆಗೆ.

ವೇಷವೇ ಸೋಜಿಗ,
ಅದರೊಳಗೆಲ್ಲವೂ ಭಕ್ತಿ ಯುಗ,
ಮುಕ್ತಿಯ ಮಧುರ ಮನ ತುಂಬಲು, ಹೊರಟಿರುವೆ ಜೋಗಿ ಮನೆ ಮನೆಗೆ.

ಭಕ್ತಿಯ ಭಿಕ್ಷೆ ಬೇಡುವೆ,
ಮುಕ್ತಿಯ ಮಾರ್ಗ ಹಾಡಿ ತೋರಿಸುವೆ, ಭವದ ಸಂಕಟ ಮರೆಸಲು,
ಹೋರಟಿರುವೆ ಜೋಗಿ ಮನೆ ಮನೆಗೆ.

ಓ ಜೋಗಿ ನಿನ್ನ ಈ ಕಾಯಕಕೆ ನೆಲೆಯಿಲ್ಲ,
ಈ ಜಗವೆ ನಿನ್ನ ಅರಮನೆಯಲ್ಲ, ಭಕ್ತಿಯ ದಾರಿ ತೋರಿಸಿ,
ಮುಕ್ತಿಯ ಮಾರ್ಗ ಕಲಿಸಲು,
ಸದಾ ಸಾಗು ಜೋಗಿ ನೀ ಮನೆಯಿಂದ ಮನೆಗೆ.....!

$ ವಸಂತ ಬಿ ಈಶ್ವರಗೆರೆ $

ಮಳೆರಾಯ

ಬರಡು ಭೂಮಿಗೆ, 
ಮುತ್ತಿನ ಹನಿಗಳ ಸುರಿಸಿ, 
ಹಸಿರ ಚಿಗುರಿಸು ಮಳೆರಾಯ. 

ಕಾದು ಬಾಯ್ದೆರೆದಿದೆ, 
ನಿನ್ನ ಆಗಮನದ ನಿರೀಕ್ಷೆಯಲಿದೆ, ಸುರಿಯಲು ಬಾರೆಯ ಮಹರಾಯ..?

ರೈತ ಮುಗಿಲತ್ತ ನೋಡುತ, 
ಪಶು ಪಕ್ಷಿಗಳೆಲ್ಲ ನಿನಗಾಗಿ ಹುಯ್ಯಲಿಡುತ, 
ಕರುಣೆ ತೋರಲಾರೆಯ ಮುನಿದ ಮಾಯ...? 

ಬೆಟ್ಟದಲಿ ಹಸಿರಿಲ್ಲ, 
ಭುವಿಯಲಿ ತಂಪಿನ ಕಂಪಿಲ್ಲ, ತೋರಲಾರೆಯ ಹೊಸ ಚೇತನ ರಾಯ...? 

ನೀರಿಗಾಗಿ ಆಹಕಾರ ಏಳುವ ಮುನ್ನ, 
ಜಾನುವಾರುಗಳು ಹಸಿವಿನಿಂದ ಸಾಯುವ ಮುನ್ನ, 
ಈ ಧರೆ ಬಾಯಿ ಬಿಟ್ಟು ಎಲ್ಲರನು ಮಣ್ಣಾಗಿಸುವ ಮುನ್ನ, 
ನಿನ್ನ ಸಿಂಚನ ಸುರಿಸು, 
ಕುಂಚದಲಿ ಹಸಿರ ಸಿರಿಯನು ಮೂಡಿಸು, 
ಜನ ಜಾನುವಾರುಗಳ ಮನ ದುಂಬಿ ನಲಿಸು....!

$ ವಸಂತ ಬಿ ಈಶ್ವರಗೆರೆ $

ಬುಧವಾರ, ನವೆಂಬರ್ 7, 2012

ಉತ್ತರವಿಲ್ಲ

ಸಂಬಂಧಗಳ ಕೊಂಡಿ ಕಳಚಿ,
ಸ್ನೇಹದ ಸಲುಗೆಯ ಬಿಚ್ಚಿ,
ಪ್ರೀತಿಯ ಒಲುಮೆಯ ಚುಚ್ಚಿ,
ಬಿಟ್ಟು ಹೊರಟೆ ನೀ ಏಲ್ಲಿಗೆ ....?

ಉತ್ತರ ನಿನ್ನೊಳಗೆ ಇಲ್ಲ ಎಂದರೇ...
ಪ್ರಶ್ನೆಗಳ ಹುಟ್ಟಿಸಿದ್ದಾದರೂ  ಏಕೆ ನನ್ನೊಳಗೆ.....?

ನಿನಗೆ ನನ್ನ ಸಂಬಂಧ ಬೇಡ,
ಪ್ರೀತಿಯ ಒಲುಮೆಯೂ ಬೇಡ,
ನನ್ನ ಸ್ನೇಹದ ಸಹವಾಸವಂತೂ ಬೇಡವೇ ಬೇಡ.
ಆದರೇ.....!
ಅನಾಮಿಕೆಯಂತೆ ಅದರೂ ಇರಬಹುದಲ್ಲವೇ ಜೊತೆಗೆ.....?

ನಿನ್ನಿಂದ ಮೊದಲ ಸ್ನೇಹ
ಪ್ರೇಮ ಸಿಗದೇ ಹೋದರೂ..
ನೆನಪೋಳಗಾದರೂ...
ಕನವರಿಕೆಯ ನಲುಮೆಯಿಂದಾದರೂ...
ಎಲ್ಲವ ಮರೆತು ಮಾತಡಬಹುದಲ್ಲವೇ ನನ್ನ ಜೊತೆಗೆ...?

ಅದರೂ ಒಮ್ಮೊಮ್ಮೆ ಅನಿಸುವುದು
ನನ್ನ ಮನ ಮಿಡಿದ ವಾತ್ಸಲ್ಯ,
ನೆಮ್ಮದಿಯ ಸ್ನೇಹದ ಸಾಂಗತ್ಯ,
ಪ್ರೀತಿಯ ರಸದ ಚಿಲುಮೆ,
ಏಕೆ ಬೇಡವಾಯಿತು ನಿನಗೆ ಎಂದು.....?


ನನ್ನ ಪ್ರಶ್ನೆಗಳಿಗೆ ಕಾಲ ಉತ್ತರ ನೀಡಬೇಕಿಲ್ಲ..
ನೀನೆ  ನೀಡಬೇಕು...!

ನಾ ಕಾಯುವೆ ದಿನಕ್ಕಾಗೆ,
ಅದೆಷ್ಟು ಬೆಂದರೂ ಬೇಗೆ,
ಬೇಯಲಿ ಅಲ್ಲಿಯವರೆಗೂ ನನ್ನೊಳಗೆ.....!

$
ವಸಂತ ಬಿ ಈಶ್ವರಗೆರೆ $

ಭಾನುವಾರ, ನವೆಂಬರ್ 4, 2012

ಬಿಟ್ಟು ಹೋದೆಲ್ಲಿಗೆ ಗೆಳತಿ



ಹೇಗೆ ಮರೆಯಲಿ ಗೆಳತಿ ನಿನ್ನ ನೆನಪ...?
ಮರೆತರು ಮರೆಯಲಾಗದು ನಿನ್ನೊಟ್ಟಿಗೆ  ಕಳೆದ ನೆನಪ..?

ಭಾವನೆಗಳಿಗೆ ಬಣ್ಣ ಕೊಟ್ಟು,
ಕಲ್ಪನೆಗೆ ರೂಪ ಇಟ್ಟು,
ಜೊತೆಗೆ ನಡೆದ ನೆನಪ
ಮರೆಯಲಾಗದು ಗೆಳತಿ  ನಿನ್ನ ನೆನಪ...!

ಕೈ ಹಿಡಿದು ಜೊತೆ ನಡೆದೆ,
ಕೋಟಿ ಕೋಟಿ ಕನಸುಗಳ ನನ್ನೊಂದಿಗೆ ಕಟ್ಟಿ,
ಕಲ್ಪನೆಗೂ ನಿಲುಕದ ಭಾವನೆಗಳ ಬೆಳಸಿದೆ,
ಕನಸುಗಳು ಮಾಗಿ,
ಹೂಬಿರಿದು ಬಾಗಿ,
ಮುಡಿಯ ಸೇರಲು ಹವಣಿಸುವ ವೇಳೆ
ಬಿಟ್ಟು ಹೊದೆಲ್ಲಿಗೆ ಗೆಳತಿ....?

ಕಷ್ಟ ನೂರು ಇರಲಿ
ಇಷ್ಟದಿ ಬದುಕುವ ಜೀವನ ಕಲಿಸಿದೆ,
ಬದುಕೇ ಬೇಡವೆಂದಾಗ ಬದುಕಿ ಸಾದಿಸುವ  ಛಲ ತುಂಬಿದೆ,
ಛಲದಲ್ಲಿ ಸಾದಿಸಿ ಗುರಿ ಮುಟ್ಟಿ ನಿನ್ನ ಜೊತೆಗೂಡುವ ಮುನ್ನ...
ಬಿಟ್ಟು ಹೊದೆಯ ಗೆಳತಿ ನನ್ನ ಒಂಟಿಯಾಗಿ....?

ಗೆಳತಿ ಈಗ ನೀನಿಲ್ಲ ನನ್ನೊಂದಿಗೆ...
ಆದರೆ ಸದಾ ಇದೆ ನಿನ್ನ ನೆನಪು ನನ್ನ ಜೊತೆಗೆ...!

$ ವಸಂತ ಬಿ ಈಶ್ವರಗೆರೆ $



ಭಾನುವಾರ, ಅಕ್ಟೋಬರ್ 14, 2012

ಅರ್ಧ ಬರೆದ ಕವನ 8


ನಿನ್ನ ಸುತ್ತ ಸುತ್ತುತ್ತೇನೆ ಗಾಳಿ ತರ.

ಕಂಡರೂ ಕಾಣದ ಹಾಗೆ ಇರುತ್ತೀನಿ ದೆವ್ವದ ತರ. 

ಪ್ರೀತಿ ಮಾಡ್ತೇನೆ ಷಹಜಹಾನ್ಗಿಂತ ಸ್ವಲ್ಪ ಕಡಿಮೆ ತರ.

ಉಸಿರೂಳಗೆ ಉಸಿರಾಗಿರುತ್ತೀನಿ ನಿನ್ನ ಎದೆ ಬಡಿತದ ತರ.

ದಿನಾಲೂ ಬೀಳೋ ಕನಸಾಗಿ ಬರುತ್ತೇನೆ ನೆನಪಿನ ತರ.

ಹೆದರಬೇಡ ಹುಡುಗಿ
ಎಲ್ಲೂ ಹೋಗದೇ ಇರುತ್ತೀನಿ ಸದಾ ನಿನ್ನ ಹುಡುಗನ್ ತರ.
 
 
$ ವಸಂತ ಬಿ ಈಶ್ವರಗೆರೆ $

ಅರ್ಧ ಬರೆದ ಕವನ 7

ಕಳೆದದ್ದು  ಕೆಲವೇ  ಕೆಲವು ದಿನ, 
ಅದರೇ..! 
ಅವೆಷ್ಟು ಕನವರಿಕೆ ನಿನ್ನ ಬಗ್ಗೆ, 
ನೆನಪಿನ ಬುತ್ತಿಯ ಹೊರಗೂ-ಒಳಗೆ. 

ಮಡುಗಟ್ಟಿತ್ತು ದುಃಖ, 
ಕಳೆ ಗುಂದಿತ್ತು ಮನಸ್ಸು, 
ನಿನ್ನ ನೆನಪಿನ ಕೊರಗು-ಮರುಗಿನೊಳಗೆ. 

ಎಷ್ಟು ದಿನ ಈ ಮೌನ..? 
ಯಾಕಾಗಿ ಈ  ದ್ಯಾನ.? ಹೇಳಬಾರದೆ ಗೆಳತಿ ನಿನ್ನ ಮನದೊಳಗಿನ ಗ್ಯಾನ..!

ಕಾಯಿಸಬೇಡ ನೀ ಹೀಗೆ, 
ಕಾಯಲಾರೆ ನಾ ನಿನಗೆ, 
ಬಂದು ಬಿಡು ಬೇಗ ನನ್ನ ಮನಸ್ಸೆಂಬ ಮಹಲೋಳಳಗೆ..!
  
$ ವಸಂತ ಬಿ ಈಶ್ವರಗೆರ್ $

ಅರ್ಧ ಬರೆದ ಕವನ 6

ಮನ ಮಿಡಿದಿದೆ ನಿನ್ನ ಒಲವಿನಲಿ. 
ತನುಕರಗಿದೆ ನಿನ್ನ ಪ್ರೀತಿಯ ಚಿಲುಮೆಯಲಿ. 
ದೂರವಿದ್ದರೂ ಹತ್ತಿರದಿ ಇರುವ ಭಾವನೆ. 
ಹತ್ತಿರಾಗಿದ್ದರೆ ಜೋತೆಗಿದ್ದ ಭಾವನೆ.
 ನನ್ನ ಈ ನೆನಪುಗಳ ಸಾಲಿನೊಳಗೆಲ್ಲ ನಿನದೇ ನಿವೇದನೆ. 

$ ವಸಂತ ಬಿ ಈಶ್ವರಗೆರೆ $

ಅರ್ಧ ಬರೆದ ಕವನ 5

ಕರಗುವ ಹಿಬ್ಬನಿಯ ಅಂದ,
ಮಿರುಗುವ ನಿನ್ನಯ ಚೆಂದ,
ಸ್ನೇಹದೊಳಗೆ ಹೂತು,
ಪ್ರೀತಿಯೊಳಗೆ ಸೋತು,
ಮಮತೆಯೊಳಗೆ ಬಿತ್ತು.
ಭಾವನೆಯೊಳಗೆ ಕರಗಿ,
ಹಂಭಲಿಕೆಯಲಿ ಗುನುಗಿ, 
ಹುಟ್ಟಿದೆ ಇಂತಹ ಒಂದು ಕವಿತೆ.

$ ವಸಂತ ಬಿ ಈಶ್ವರಗೆರೆ $ 

ಅರ್ಧ ಬರೆದ ಕವನ 4

ಕಾರ್ಮೋಡ ಕವಿದಿರುಳ ಒಳಗೆ ಕಾಣದೆ ಮರೆಯಾಗಿರುವೆ.
ಕನವರಿಕೆಯ ನೆನಪು ನಮ್ಮಿಬ್ಬರ ಒಳಗೂ ಮಾಸಿಲ್ಲ.
ಕರಿ ಮುಗಿಲ ಮರೆಯೊಳಗೆ ಮಿಂಚಿ ಮಿನುಗುವ ನಕ್ಷೆತ್ರದಂತೆ ಮಿನುಗುತಿದೆ. 
ಮನ ತೆರೆದು ನೋಡೋಮ್ಮೆ...!
ಬಾಂದಳದಿ ಮರೆಯಾದ ಸೂರ್ಯ ನಾಳೆ ಮತ್ತದೇ ಜಗವ ಬೆಳಗುವನು...!
ನಿನ್ನ ನೆನೆವ ನನ್ನ ಮನದೊಳಗೆ,
ನೀನು ಪ್ರತಿ ದಿನವು ಬೆಳಗುವೆ....!

$ ವಸಂತ ಬಿ ಈಶ್ವರಗೆರೆ $ 

ಅರ್ಧ ಬರೆದ ಕವನ 3

ನೆನಪಾಗುವೆ ಹಗಲಿರುಳು ಎನ್ನದೆ.
ಕನಸಾಗಿ ಕಾಡುವೆ ನೆನಪಿನೊಳಗೆ.
ಮಾತಿಗೆ ಜೊತೆಯಾಗುವೆ ಮೌನದೊಳಗೆ.
ಪ್ರೀತಿಗೆ ಪ್ರಾಣವನ್ನೇ ಕೊಡುವೆ ಈ ಸ್ನೇಹದೊಳಗೆ.
ಇಂತಹ ನಿನ್ನ ನಾ ಮರೆವುದು ಉಂಟೆ ಕನಸು-ಮನಸಿನೊಳಗೆ...!?

$ ವಸಂತ ಬಿ ಈಶ್ವರಗೆರೆ $

ಅರ್ಧ ಬರೆದ ಕವನ 2

ಬದಲಾಗುವ ಜಗದೊಳಗೆ,
ಕದಲುವೆವು ಅಡಿಗಡಿಗೆ,
ಕಾಣದ ಕೈಗಳ ಕಾಟ,
ಜೀವನ ದುಡಿಮೆಯ ಓಟ,
ಬೆಂದು, ನೊಂದು, ನಲುಗಿದರೂ
ಮುನ್ನುಗ್ಗಲಿ ಮುಂದಿನ ಗುರಿಯತ್ತ ನಮ್ಮ ನೋಟ....! 
ಶುಭ ಸಂಜೆ ಗೆಳೆಯರೇ.....!

$ ವಸಂತ ಬಿ ಈಶ್ವರಗೆರೆ $

ಅರ್ಧ ಬರೆದ ಕವನ 1

ಪೆನ್ನಿಗೆ ಸ್ಫೂರ್ತಿ ತುಂಬಿ,
ಖಾಲಿ ಪುಟದಲಿ ಭಾವನೆ ಒತ್ತಿ,
ಬರೆದು ಕಳಿಸು ನಿನ್ನೋಲವಿನ ನೆನಪಿನೋಲೆ.

ಪ್ರತಿ ಸಾಲು ನನಗಾಗಿ,
ಪ್ರತಿ ಪದವು ಇನಿಯನ ಉಸಿರಾಗಿ,
ಕಟ್ಟಿ ಬರಲಿ ಅಚ್ಚೋತ್ತಿರದ ನಿನ್ನ ಅಂದದ ಓಲೆ.

ಮನಸಿನೊಳಗಿನ ಭಾವನೆ,
ನೆನಪಿನ ಒಳಗಿನ ನನ್ನಯ ಕನಸು,
ಪ್ರತಿ ಒಲೆಯ ಒಳಗೆಲ್ಲ ಹಸಿರಾಗಿ,
ಉಸಿರು ನಿಲ್ಲುವ ತನಕ,
ನೆಲೆ ನಿಲ್ಲುವಂತಿರಲಿ ಆ ನಿನ್ನ ಓಲೆ....!

$ ವಸಂತ ಬಿ ಈಶ್ವರಗೆರೆ $

ಬುಧವಾರ, ಆಗಸ್ಟ್ 29, 2012

ಯಶಸ್ಸು


ಬದುಕು ಬರವಸೆಯ ಗೂಡು
ಕಾಲವೇ ಅದಕೆ ನಿರ್ಣಯ ನೋಡು.
 
ಕಾಯ ಬೇಕು ನಾಳೆಗೆ 
ಕಾಪಿಡಬೇಕು ಬಾಳಿಗೆ.
 
ಮೌನಕ್ಕೆ ಶರಣಾಗದಿರು
ಯಾರ ಮಾತಿಗೂ ಕಿವಿಯ ಗೊಡದಿರು.
 
ಕಾಲದ ಉರುಳಿಗೆ ಕುಣಿಯಲೇ ಬೇಕು
ತಾಳದ ಲಯಕ್ಕೆ ಶ್ರುತಿ ಹೊರಡಲೇ ಬೇಕು.
 
ಎದರ ಬೇಡ.......!
 
ಕಷ್ಟವಿದ್ದರೂ ಸೈ
ದು:ಖ ಬಂದರು ಜಯಿಸಲು ಸೈ
 
ತಲೆ ಬಾಗದಿರು ಯಾರಿಗೂ
ಯಶದ ಶಿಖರವೆ ಆಗ ನಿನ್ನಯ ಪಾಲಿಗೆ....!
 
$ ವಸಂತ ಬಿ ಈಶ್ವರಗೆರೆ $

ಗುರುವಾರ, ಆಗಸ್ಟ್ 23, 2012

ಬದುಕು


ಬಾಳೆಂಬ ಬದುಕಿನ ಯಾನ
ಬಂಧನಗಳ ಬೆಸುಗೆಯಲಿ ಸಿಲುಕಿ,
ಕಷ್ಟಗಳ ನಲುಮೆಯಲಿ ಕುಲಿಕಿ,
ನಡೆಯುತಿದೆ ಹೊಸತು ಹಳತುಗಳ ಜೊತೆಗೂಡಿದ ಯಾನ...!


ಕಷ್ಟಕ್ಕೆ ಕೊನೆ ಇಲ್ಲ
ಇಷ್ಟಕ್ಕೆ ಮಿತಿ ಇಲ್ಲ
ಕಷ್ಟ-ಸುಖವರಿತು ನಡೆದಾಗ,
ಬದುಕು ಬೇವು ಬೆಲ್ಲದ ಜೊತೆಗಿನ ಯಾನ....!

$ ವಸಂತ ಬಿ ಈಶ್ವರಗೆರೆ $ 

ಶನಿವಾರ, ಜುಲೈ 21, 2012

ಗೆಳತಿ ಕೇಳು ನನ್ನ ವಿನಂತಿ

ಕರಗುವುದು ಇಬ್ಬನಿ 
ಮುಂಜಾನೆಯ ಸೂರ್ಯನ ಮೊದಲ ರಶ್ಮಿಗೆ.
ಆಗ ಸೆಳೆಯುತಿದೆ ನೆನಪು 
ನಿನ್ನ ಪ್ರೀತಿಯ ಕಡೆಗೆ.

ಹಾಡಿದೆ ಕೋಗಿಲೆ 
ಹೊಸ ಚಿಗುರಿನ ಆಗಮನಕೆ.
ಈಗ ಕನವರಿಸುತಿದೆ ಮನ 
ನಿನ್ನಯ ಪ್ರೀತಿಯ ಹಂಬಲಿಕೆಗೆ. 

ಹಡೆದವ್ವನ ಹಾರೈಕೆಯಲಿ 
ಕಂದಮ್ಮ ಮುದ್ದು.
ನಿನ್ನ ಅಭಿಸರಿಕೆಯ ಅಲಿಂಗನದಲಿ
ನಾನೀಗ ಬಲು ಪೆದ್ದು.

ಕೇಳು ಗೆಳತಿ.....!
ಮುಂಜಾನೆಯ ಮಂಜು
ಸೂರ್ಯನ ಕಿರಣಕ್ಕೆ ಕರಗಬಹುದು,
ಕೋಗಿಲೆಯ ಗಾನ 
ವಸಂತ ಮಾಸದಲಿ ಮಾತ್ರ ಕೇಳಬಹುದು,
ಹಡೆದವ್ವನ ಹಾರೈಕೆ 
ಅಡಿಗಡಿಗೂ ಸಿಗಬಹುದು.

ಆದರೇ......!
ನಿನ್ನ ಪ್ರೀತಿ ಕ್ಷಣ ಕಾಲ ದೊರೆತರೂ...,
ನಾನೇ ದಾನ್ಯ,
ನನ್ನದೇ ಪುಣ್ಯ,
ಈ ಜೀವನವೇ ಪಾವನ......!

$ವಸಂತ ಬಿ ಈಶ್ವರಗೆರೆ$



ಶುಕ್ರವಾರ, ಜೂನ್ 29, 2012

ಮಲ್ಲಿಗೆ

ಹಾಲ್ ಚೆಲ್ಲಿದಾಂಗ ಹೊಳಿತಾದ ಮಲ್ಲಿಗೆ
ಬೆಳದಿಂಗಳಲ್ಲಿ ನೋಡ್ಯಾಂಗ ಹರಲೈತಿ ಮಲ್ಲಿಗೆ
ಇದ ನೋಡೂಕಾ ಎರಡ ಕಣ್ ಸಲದಾಗೈತಿ..
ಏನ್ ಚೆಂದ ಮಲ್ಲಿಗೆ,
ನಿನ್ ಗುಡಿ, ಮುಡಿ, ಎಲ್ಲೆಂದರಲ್ಲಿ ನಿಂದೆ ದರ್ಬಾರಾಗೈತಿ...!
 
ಗಮ್ ಅಂತ ಸುವಾಸನೆ ಹೊರಸೂಸೈತೆ,
ನೂರಾರು ಅಡಿ ದೂರ ಇದ ಹರಡೈತೆ
ಹೋಗೋ ಮಂದಿ ಎಲ್ಲ ಇದ ಮೂಸಿ ನೋಡೈತೆ.
ಏನ್ ಚೆಂದ ಮಲ್ಲಿಗೆ,
ನಿನ್ ಗುಡಿ, ಮುಡಿ, ಎಲ್ಲೆಂದರಲ್ಲಿ ನಿಂದೆ ದರ್ಬಾರಾಗೈತಿ...!
 
ದುಂಡು ಮಲ್ಲಿಗೆಯ ಗಮ್ಮತ್
ಸೂಜಿ ಮಲ್ಲಿಗೆಯ ಕರಾಮತ್
ಜಾಜಿ ಮಲ್ಲಿಗೆಯ ಬಣ್ಣದ್ ಬಿಮ್ಮತ್
ಏನ್ ಚೆಂದ ಮಲ್ಲಿಗೆ,
ನಿನ್ ಗುಡಿ, ಮುಡಿ, ಎಲ್ಲೆಂದರಲ್ಲಿ ನಿಂದೆ ದರ್ಬಾರಾಗೈತಿ...!
 
ಹಾಸಿಗೆಯಲಿ ವಾಲಿಸ್ಯಾಡತಿ 
ಮುಡಿಯ ಸೇರಿ ನಗಿಸ್ಯಾಡತಿ
ಗುಡಿಯ ಸೇರಿ ನೀ ಪೂಜಿಸಲ್ಪಡತಿ
ಏನ್ ಚೆಂದ ಮಲ್ಲಿಗೆ,
ನಿನ್ ಗುಡಿ, ಮುಡಿ, ಎಲ್ಲೆಂದರಲ್ಲಿ ನಿಂದೆ ದರ್ಬಾರಾಗೈತಿ...!
 
$ ವಸಂತ ಬಿ ಈಶ್ವರಗೆರೆ $

ಸೋಮವಾರ, ಜೂನ್ 18, 2012

ಕೊರಗು


ಕಳೆದದ್ದು ಕೇವಲ ನಾಲ್ಕೇ ನಾಲ್ಕು ದಿನ
ಆದರೆ ಅವೆಷ್ಟೋ ಕನವರಿಕೆ ನಿನ್ನ ಬಗ್ಗೆ...?
ನೆನಪಿನ ಬುತ್ತಿಯ ಹೊಳಗು-ಹೊರಗೆ....!

ಮಡುಗಟ್ಟಿತ್ತು ದುಃಖ
ಕಳೆಗುಂದಿತ್ತು ಮನಸ್ಸು
ನಿನ್ನ ನೆನಪಿನ ಕೊರಗು-ಮರುಗಿನೊಳಗೆ....!

ಎಷ್ಟು ದಿನ ಈ ಮೌನ..?
ಯಾಕಾಗಿ ಈ ದ್ಯಾನ..?
ಹೇಳಬಾರದೆ ಚಿನ್ನಾ ನಿನ್ನ ಮನದೊಳಗಿನ ಮೌನ....!

ಕಾಯಿಸಬೇಡ ನೀ ಹೀಗೆ
ಕಾಯಲಾರೆ ನಾ ನಿನಗೆ
ಬಂದುಬಿಡು ಬೇಗ ನನ್ನ ಮನಸ್ಸೆಂಬ ಮಮತೆಯ ಮಹಲೊಳಗೆ..!

                                                     $ ವಸಂತ ಬಿ ಈಶ್ವರಗೆರೆ $

ಶನಿವಾರ, ಮೇ 12, 2012

ಗೆಳತಿ



ಗೆಳತಿ ನಿನಗಾಗಿ ಬರೆದ ಪದಗಳೆಂಬ ಪುಂಜವ ಒಟ್ಟುಮಾಡಿ
ಇಂದು ನಿನ್ನ ಮೇಲೆ ಕವನ ಕಟ್ಟಿ ಸುರಿಮಳೆ ಗೈಯುವೆ.
 
ಕಪ್ಪು ಸಮುದ್ರದಲಿ ತೆಳುವ ಚಂದ್ರನ ತಂದು
ನಿನಗಾಗಿ ಕವನದಲಿ ಇಟ್ಟು ಕೊಡಲೇನು...?
 
ಸುಲಿದು ಕೊಡಲೇನು ಹೃದಯದಲಿ ತುಂಬಿರುವ ಭಾವನೆಯ ಕವಿತೆಗಳ ಒಂದೊಂದಾಗಿ...?
ವರ್ಣಿಸುವೆ ನಿನ್ನ ಸೌಂದರ್ಯ, ಗೆಳೆತನ, ಸ್ನೇಹ ಅದರೊಳಗೆ..!
ಹರಿಸುವೆ ಹೀಗೆ ಸಾಗರದಷ್ಟೇ ವಿಶಾಲ ಸಾಲುಗಳ ಕವಿತೆ ನಿನಗಾಗಿ.
ಗೆಳತಿ ಬಚ್ಚಿಟ್ಟುಕೋ ನೀ ನನ್ನ ಕವನದ ಒಳಗೆ ಬೆಚ್ಚನೆ.
ದುಖ:ವಿರಲಿ, ಸುಖವಿರಲಿ, ಹಂಚಿಕೊಳ್ಳುವ ಜೀವನದೊಳಗೆ.
ಗೆಳತಿ ಅನುಮಾನ ಬೇಡ ನನ್ನ ಮೇಲೆ, ಸದಾ ನಿನ್ನ ಜೊತೆಗಿರುವೆ ನಿನ್ನ ಕಣ್ಣರೆಪ್ಪೆ ಹಾಗೆ..!
 
$ ವಸಂತ ಬಿ ಈಶ್ವರಗೆರೆ $

ಶನಿವಾರ, ಮೇ 5, 2012

ನಲ್ಲೆ

ಕಣ್ ಸನ್ನೆಯ ನೋಟ 
ತುಟಿಯಂಚಿನ ಮಾಟ
ನಲ್ಲೆ ನಿನ್ನ ನೋಟದಲ್ಲಿ.

ಬರಸೆಳೆವ ಮನಸ್ಸು 
ಬಿಗಿದಪ್ಪುವ ಕಾತರ 
ನಲ್ಲೆ ನೀ ಜೋತೆಗಿದ್ದಲ್ಲಿ.

ಕತ್ತಲಾದರೆ ಸಾಕು
ಮನ ಹೋಲುವುದು ನಿನ್ನತ್ತ
ನಲ್ಲೆ ನಿನ್ನ ಮೋಹದಲ್ಲಿ.

ಮುತ್ತು ಕೊಡುವೆ
ಮತ್ತೇರಿಸುವಂತೆ ನಗುವೆ
ನಲ್ಲೆ ನಿನ್ನೊಡನೆಯ ರಾತ್ರಿಯಲ್ಲಿ.

ಅನುರಾಗಕೆ ಅವಸರವಿಲ್ಲ
ಪ್ರಿತಿಯಷ್ಟೇ ಸದಾ ನೀ ಕೊಡುವೆಯಲ್ಲ
ನಲ್ಲೆ ಬಾಳ ಪಯಣದಲ್ಲಿ...!

ಭಾನುವಾರ, ಏಪ್ರಿಲ್ 15, 2012

ನಾನೀಗ ಕವಿಯಾಗುವೆ

ಕವಿಯಾಗುವೆ
ಮಲೆನಾಡ ಮಡಿಲೊಳಗೆ ಮಗುವಾಗುವೆ....!
ಹಸಿರೋದ್ದ ಸೆರಗೊಳಗೆ 
ಬಿಸಿಯಪ್ಪುಗೆಯ ಆಲಿಂಗನ  
ಮೈಮರೆತು ನಾನೀಗ ಕವಿಯಗುವೆ 
ಮುದ್ದು ಮಗುವಾಗುವೆ...!
 
ಗುಯ್ ಗುಡುವ ಜೇಂಕಾರದ ಸದ್ದು 
ಸಾಲಂಕೃತ ಮರಗಳ ಸಾಲು
ಇದುವೇ ನನ್ನಯಾ ಅರಮನೆ 
ಇಲ್ಲೇ ನನ್ನರಸಿಯ ಸಿರಿಮನೆ
ಕವಿಯಾಗುವೆ ನಾ ಹಸಿರೊಳಗೆ 
ಹಾಲುಗಲ್ಲದ ಮಗುವಾಗುವೆ....!
 
ಕಪ್ಪು ಕಾನನದೊಳಗೆ
ಮೆಚ್ಚಿನ ಪ್ರೀತಿಯ ಬೆಸುಗೆ
ಹುಚ್ಚೆದ್ದು ಕುಣಿದಿದೆ ಮನ
ಮೆಚ್ಚಿ ಉಲಿದಿದೆ ತನು
ಕವಿಯಾಗುವೆ ಮಲೆನಾಡ ಕುವರಿಯ ಜೊತೆ
ಕವಿಯಂತೆ ಕುವರ ನಾ ಆಗುವೆ.....
ಹಸಿರಿನ ಮದುವಣಗಿತ್ತಿಯ ಜೊತೆ ಹೀಗೊಮ್ಮೆ ಕವಿಯಾಗುವೆ......!
 

ಭಾನುವಾರ, ಏಪ್ರಿಲ್ 1, 2012

ತಾಯಿಯ ಮಮತೆ

ತಾಯಿ ನಿನ್ನ ಒಡಲಲ್ಲಿ
ಕಂಡೆನಾ ಮಮತೆಯ
ಮಮತೆ ಮಾತೆಯ ಮಡಿಲಿಗಿಂದು

ನೀಡುವೆ ಈ ಕವಿತೆಯ.

ನಿನ್ನ ಒಡಲು ಬೆಂಕಿಯ ಕಡಲು
ಆದರೂ ನೀ ನೀಡುವೆ ಹಾಲಿನ ಮಡಿಲು
ಅದರಿ ಮಿಂದು ಬೆಳೆದ ಈ ದೇಹ
ನಗುತ ನಲಿವುದು ಹರುಷದಿ.

ಇಂತ ಮಾತೆ ಪ್ರೀತಿ ನೆನೆದು
ದೂರದಿ ಇರುವ ಈ ಜೀವ
ತಾಯಿ ಪ್ರೀತಿ ಕಾಣದಾಗಿ
ಮರುಗುತಿಹುದು ನೋವಲಿ.........!

$ ವಸಂತ ಬಿ ಈಶ್ವರಗೆರೆ $