ಸೋಮವಾರ, ಜನವರಿ 30, 2012

ಬದುಕು

ಬದುಕು ಜಂಜಾಟದ ಗೊಡವೆ
ನೆನಪುಗಳು ಅದರ ಒಡವೆ.
ಪ್ರೀತಿಯ ಅಲೆ ಇದ್ದಾಗ ಸಂತಸ
ಸುನಾಮಿಯ ಅಲೆ ಬಿದ್ದಾಗ ನಾಶ.
ಆದರೂ ಸಾಗಲೇ ಬೇಕು ಗೊಡವೆ, ಒಡವೆ, ಸಂತಸ, ನಾಶದ ನಡುವೆ ಬದುಕು.

ಹೆಗಲಿಗೆ ಹೆಗಲಾಗುವ ಸ್ನೇಹ
ಬಗಲಿಗೆ ಮುಳ್ಳಾಗುವ ಮೋಹ.
ನೆನಪುಗಳ ಅಲೆ ಇದ್ದಾಗ ಉಲ್ಲಾಸ
ಮೋಸದ ಬಲೆಯೋಳು ಬಿದ್ದಾಗ ನಾಶ.
ಆದರೂ ಸಾಗಲೇ ಬೇಕು ಸ್ನೇಹ, ಮೋಹ, ಉಲ್ಲಾಸ, ನಾಶದ ನಡುವೆ ಬದುಕು.

ಸರಸ ವಿರಸದ ನಡಿಗೆ
ಪ್ರೀತಿ ಪ್ರೇಮದ ಕಡೆಗೆ. 
ಮಾತೃ ಹೃದಯದ ಅಲೆ ಇದ್ದಾಗ ಸಂತಸ
ಮಧ, ಮಾತ್ಸರ್ಯದ ಅಲೆ ಎದ್ದಾಗ ನಾಶ.
ಆದರೂ ಸಾಗಲೇ ಬೇಕು ನಡಿಗೆ, ಕಡೆಗೆ, ಸಂತಸ, ನಾಶದ ನಡುವೆ ಬದುಕು.

ಒಡ ಹುಟ್ಟಿದ ಸಹೋದರರ ಕಚ-ಪಿಚ
ತಂದೆ-ತಾಯಿಗಳ ಲೊಚ-ಪಚ.
ಸಾಮರಸ್ಯದ ಅಲೆ ಇದ್ದಾಗ ಸಂತಸ
ವಿರಸದ ಅಲೆ ಎದ್ದಾಗ ನಾಶ.
ಆದರೂ ಸಾಗಲೇ ಬೇಕು ಕಚ-ಪಿಚ, ಲೊಚ-ಪಚ, ಸಂತಸ, ನಾಶದ ನಡುವೆ ಬದುಕು.

ಸೃಷ್ಟಿ ನಿಯಮದಿ ಒಡಗೂಡಿ,
ಕಾಲ ಚಕ್ರದೊಳಗೆ ಓಲಾಡಿ,
ಆದರೂ ನಡೆಯುತಿದೆ ಈ ಬದುಕು
ನೆರಳು-ಬೆಳಕಿನಾಟದ ನಡುವೆ ಮುಂದೆ, ಮುಂದೆ ಸಾಗಿ....!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ