ಶುಕ್ರವಾರ, ಮೇ 30, 2014

ಮನಸಿನ ಮೌನ

ಮನಸಿನ ಮೌನಕ್ಕೆ
ಪ್ರೀತಿಯ ರಾಗ ಬೆರೆತು
ಈಗೆಲ್ಲ ಪ್ರೇಮದ ಉತ್ಸಾಹ ನನ್ನೊಳಗೆ.

ನೀ ಬರುವ ಮುನ್ನ
ಬರಿದು ಬದುಕು
ಎಲ್ಲೆಲ್ಲೂ ಹರುಕು-ಮುರುಕು.

ಈಗ ಹಸನು ಜೀವನ
ಬದುಕು ಭಾವದ ಯಾನ
ಜೀವದ ಜೊತೆಗಾತಿ ನೀ ಬಂದ ಮೇಲೆ ಎನ್ನೋಳಗೆ.

ನನ್ನ ಬವಣೆ ನೀಗಿ
ಪ್ರೀತಿಯ ಹೊಳೆ ಹರಿಸಿದ ನಿನಗೆ
ನಾನೀಗ ಸಿಂದೂರವಿಡುಲು ಅಣಿಯಾಗಿರುವೆ ನಿನ್ನಯ ಹಣೆಗೆ...!


$ ವಸಂತ ಬಿ ಈಶ್ವರಗೆರೆ $

ಶನಿವಾರ, ಮಾರ್ಚ್ 15, 2014

ಭಯವಿಲ್ಲ


ಭಾವದ ಬಿಂದು,
ಜೀವದ ಸಿಂದು,
ನೀ ಜೊತೆಯಾಗುವೆ ಎಂದು...?

ಕನಸಲ್ಲಿ ಬರುವೆ,
ಕೈಗೆ ಸಿಗದೇ ಓಡುವೆ,
ನೀ ನನ್ನ ಜೊತೆ ಯಾವಾಗ ಆಗುವೆ...?

ನೆನಪುಗಲಾ ಬಿತ್ತಿ,
ಕಲ್ಪನೆಗಲಾ ಕೆತ್ತಿ,
ನೀ ಬರುವೆ ಯಾವಾಗ ವಾಸ್ತವತೆಯ ರೂಪವೆತ್ತಿ...?

ನಿನ್ನ ವಾಸ್ತವ ರೂಪಕ್ಕಾಗಿ ನಾ ಕಾಯುವೆ,
ಭಾವನೆಯ ಬಿಂದುವಿನಲ್ಲಿ ಜೊತೆಯಾಗುವೆ,
ಕನಸಿನ ಕನಂಗಳಲಿ ಜೊತೆಯಾಗುವೆ,
ನೆನಪುಗಳ ಅಳಿಸಿ ಬರುವ ಕಾಲಕೆ ನಾ ಕಾಯುವೆ....!

ಬಂದು ಬಿಡು ಜೊತೆಗೆ,
ಪ್ರೀತಿಯ ನೀಡು ಆ ಗಳಿಗೆ,
ಆ ಕ್ಷಣ ನಾ ಸತ್ತರೂ ಭಯವಿಲ್ಲ ನನಗೆ...!


$ ವಸಂತ ಬಿ ಈಶ್ವರಗೆರೆ $