ಶನಿವಾರ, ಮಾರ್ಚ್ 15, 2014

ಭಯವಿಲ್ಲ


ಭಾವದ ಬಿಂದು,
ಜೀವದ ಸಿಂದು,
ನೀ ಜೊತೆಯಾಗುವೆ ಎಂದು...?

ಕನಸಲ್ಲಿ ಬರುವೆ,
ಕೈಗೆ ಸಿಗದೇ ಓಡುವೆ,
ನೀ ನನ್ನ ಜೊತೆ ಯಾವಾಗ ಆಗುವೆ...?

ನೆನಪುಗಲಾ ಬಿತ್ತಿ,
ಕಲ್ಪನೆಗಲಾ ಕೆತ್ತಿ,
ನೀ ಬರುವೆ ಯಾವಾಗ ವಾಸ್ತವತೆಯ ರೂಪವೆತ್ತಿ...?

ನಿನ್ನ ವಾಸ್ತವ ರೂಪಕ್ಕಾಗಿ ನಾ ಕಾಯುವೆ,
ಭಾವನೆಯ ಬಿಂದುವಿನಲ್ಲಿ ಜೊತೆಯಾಗುವೆ,
ಕನಸಿನ ಕನಂಗಳಲಿ ಜೊತೆಯಾಗುವೆ,
ನೆನಪುಗಳ ಅಳಿಸಿ ಬರುವ ಕಾಲಕೆ ನಾ ಕಾಯುವೆ....!

ಬಂದು ಬಿಡು ಜೊತೆಗೆ,
ಪ್ರೀತಿಯ ನೀಡು ಆ ಗಳಿಗೆ,
ಆ ಕ್ಷಣ ನಾ ಸತ್ತರೂ ಭಯವಿಲ್ಲ ನನಗೆ...!


$ ವಸಂತ ಬಿ ಈಶ್ವರಗೆರೆ $

ಬುಧವಾರ, ಜನವರಿ 29, 2014

ಹಾರೈಕೆ


ಪ್ರೀತಿ ತುಂಬಿದ ಭಾವನೆ
ಮಾತಿನಲ್ಲೆಲ್ಲ ನನ್ನದೇ ನಿವೇದನೆ
ನಿನಗೆ ನನ್ನ ಕವಿತೆಯ ಕಾಮನೆ
ಖುಷಿಯಾಗು ನೀ ಓದಿ ಭಿಮ್ಮನೆ.

ಎಷ್ಟೋ ಚಡಪಡಿಕೆ
ಮತ್ತಷ್ಟು ಹಂಬಲಿಕೆ
ಹರೆಯವಿರದ ಕನವರಿಕೆ
ಬೆರಗು ಮೂಡಿಸುವ ನಿನ್ನ ಬಯಕೆ.

ಸಂತಸ ತುಂಬಿಸಲಿ
ನಗುವ ಹೊತ್ತು ಹೊತ್ತು ತರಲಿ
ಸುಖದ ಸಂಸಾದ ಹಾದಿ ಮುಂದೆ ಮುಂದೆ ಸಾಗಲಿ
ಇದೇ ನನ್ನ ಹಾರೈಕೆ
ಪ್ರೀತಿಯಲಿ ನನ್ನೀ ದೇವತೆಯ ಓಲೈಕೆ...!


$ ವಸಂತ ಬಿ ಈಶ್ವರಗೆರೆ $

ಮಂಗಳವಾರ, ಜನವರಿ 28, 2014

ಶರಣು


ಭಾವದ ಬಿಂದು
ಜೀವದ ಸಿಂಧು
ಓ ಪ್ರೇಮದ ಬಂಧು ನಿನಗೆ ನಾ ಶರಣು...!

ಮೋಹವ ಕೊಂದೆ
ಪ್ರೀತಿಯ ಓಲುಮೆಯಲಿ ಬೆಂದೆ
ಸ್ನೇಹದಲ್ಲಿ ದೂರಾದಾಗ ನೊಂದೆ.., ಮತ್ತೆ ಮರು ಜೀವ ನೀಡಿದ ನಿನ್ನ ಪ್ರೇಮಕೆ ನಾ ಶರಣು...!

ಪ್ರೀತಿ ಅಮರ
ತ್ಯಾಗ ಮಧುರ
ನಿನ್ನಂತರಂಗವೇ ಸುಮಧುರ ಎಂಬಂತೆ ಮಾಡಿದ ನಿನಗೆ ನಾ ಶರಣು...!

ಜೀವನದ ಆಟ
ಬದುಕಿನ ನಡಿಗೆಯ ಪಾಠ
ನೆಮ್ಮದಿಯ ಜೊತೆಗಿನ ಓಟ, ಕಲಿಸಿದ ನಿನಗೆ ನಾ ಶರಣು...!

ಮತ್ತೆ ಬಂದೆ ಜೊತೆಗೆ
ಇರುವೆ ನನ್ನೊಟ್ಟಿಗೆ,
ನಿನ್ನ ಕಾಪಿಡುವುದೆ ಈಗ ಎನಗೆ
ಕಳೆವೆ ಜೀವನವೇ ಕೊನೆ ಕೊನೆಗೆ ನಿನ್ನೊಂದಿಗೆ....!


$ ವಸಂತ ಬಿ ಈಶ್ವರಗೆರೆ $

ಗುರುವಾರ, ಜನವರಿ 23, 2014

ಪ್ರೀತಿ


ನೂರು ಭಾವ
ನಿನ್ನದೇ ಈ ಜೀವ
ನೀ ಜೊತೆಗಿದ್ದರೇ ಮರೆವುದು ನೋವ...!

ಬರಡಾಗಿತ್ತು ಜೀವನ
ನೀ ಬಂದ ಮೇಲೆ ಹಸಿರಾಯ್ತು ತನು-ಮನ
ಇನ್ನೇನಿದ್ದರೂ ನಮ್ಮದೇ ಸಂತಸದ ಜೀವನದ ಯಾನ...!

ಮನ ಸೆಳೆವೆ
ಪ್ರೀತಿಯ ಮಳೆ ತರುವೆ
ಇನ್ನು ಮುಂದೆ ಏನಿದ್ದರೂ ನಿನ್ನೊಂದಿಗೆ ನಗುವೆ...!

ಬಯಸಿ ಬಂದೆ
ಸಂತಸವ ಬಾಳಲ್ಲಿ ನೀ ತಂದೆ
ಜೊತೆಯಾಗಿ ನಡೆಯೋಣ ಏನೇ ಆಗಲಿ ಇನ್ ಮುಂದೆ...!


$ ವಸಂತ ಬಿ ಈಶ್ವರಗೆರೆ $